Introduction

ನಮ್ಮ ಕಿರುಪರಿಚಯ

ನಮ್ಮ ಕಿರುಪರಿಚಯ:

ಮೊದಲಿನಿಂದಲು ನಮ್ಮ ಟ್ರಸ್ಟಿಗಳ ಮನಸ್ಸಿನಲ್ಲಿ ಬಡವ, ದೀನ, ಪೀಡಿತ ಮತ್ತು ಶೋಷಿತರ ಬಗ್ಗೆಗೆ ದಯಾ ಮನೋಭಾವ ಮೂಡಿದ್ದು, ನಮಗಿಷ್ಟೊಂದು ಕೊಟ್ಟಿರುವ ಈ ದೈವಸೃಷ್ಟಿಗೆ, ಸಾಯುವ ಮೊದಲು ನಾವೇನಾದರು ಮಾಡಲೇಬೇಕೆಂಬ ತುಡಿತವು ಹೊಗೆಯಾಡುತ್ತಿತ್ತು. ನಂತರ, ೨೦೦೮-೦೯ರಲ್ಲಿ, ನಾವೆಲ್ಲರೂ ಒಂದಾಗಿ ಒಂದು ಗುರುಕುಲಾಶ್ರಮ ಮತ್ತು ಒಂದು ಅನಾಥಾಶ್ರಮವನ್ನು ಚಿಕ್ಕದಾಗಿ ಆರಂಭಿಸಿದ್ದೆವು. ನಮ್ಮ ಸಂಸ್ಥೆಯು ಆಗ ಅಧಿಕೃತವಾಗಿ ನೊಂದಾಯಿತವಾಗದ ಕಾರಣ, ಆರಂಭದಲ್ಲಿ ನಮಗೆ ಅಷ್ಟೊಂದು ಬೆಂಬಲವು ಲಭ್ಯವಾಗಿರಲಿಲ್ಲ. ಆದರೂ ಸೋಲನ್ನೊಪ್ಪದ ನಾವು ಹಾಗೆಯೇ ಮುಂದುವರೆದು, ನಮ್ಮ ಛಲವನ್ನು ಬಿಡದೆ, ಆಗಾಗ ನಮ್ಮ ಸುತ್ತಮುತ್ತ, ಶ್ರೀಪುರುಂದರ ದಾಸರ ಆರಾಧನೆ, ಶ್ರೀತ್ಯಾಗರಾಜರ ಆರಾಧನೆ, ಸಾರ್ವಜನಿಕ ಗಣೇಶೋತ್ಸವಾದಿಗಳನ್ನು ಪ್ರಾರಂಭಿಸಿ, ನಮ್ಮ ಸುತ್ತಮುತ್ತಲ ಸಮಾಜಕ್ಕೆ ನಮ್ಮನ್ನು ನಾವೇ ಪರಿಚಯಿಸಿಕೊಂಡೆವು.

ತದನಂತರವೇ, ವರ್ಷ ೨೦೦೯ರಲ್ಲಿ ತ್ಯಾಗರಾಜರ ಆರಾಧನೆ ಮತ್ತು ಉಚಿತ ರಕ್ತದಾನದ ಜೊತೆಗೆ ಆರಂಭವಾದ ನಮ್ಮ ಈ ಧರ್ಮದತ್ತಿಯು, ತನ್ನದೇ ಆದ ಸ್ವಸ್ಥಾನವಿಲ್ಲದೇ ೨೦೧೧ರ ತನಕವು ಕೂಡಾ ಕೆಲವು ದಾನಿಗಳ ಮನೆಗಳಲ್ಲಿ ಸಾಗುತ್ತಿತ್ತು. ನಂತರ, ವರ್ಷ ೨೦೧೧ರ ಅಂತ್ಯಕ್ಕೆ ಬಾಡಿಗೆಗೆ ಒಂದು ಸ್ಥಳವನ್ನು ಪಡೆದು, ಅಲ್ಲಿಯೇ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಬಂದಿತ್ತು. ಆರಂಭದಲ್ಲಿ ಕೇವಲ ನಾಲ್ಕೇ ಮಕ್ಕಳಿದ್ದ ನಮ್ಮ ಧರ್ಮದತ್ತಿಯು ಕ್ರಮೇಣವಾಗಿ ಬೆಳೆಯುತ್ತಾ, ಈಗ ನಮ್ಮಲ್ಲಿ ಮೂವತ್ತೆರಡು ಮಕ್ಕಳಿದ್ದಾರೆ. ನಂತರ, ೨೦೧೨ರಲ್ಲಿ ನಾವು ನಮ್ಮ ಧರ್ಮದತ್ತಿಯನ್ನು ನೊಂದಾಯಿಸಿ, ಅದೇವರ್ಷದಲ್ಲಿಯೇ ನಮಗೆ ಸರ್ಕಾರದಿಂದ ಅಧಿಕೃತವಾಗಿ (೧೨-ಏ) ನೊಂದಾಣಿಕೆಯೂ ಲಭ್ಯವಾಯಿತು.

ನಂತರ, ನಮ್ಮ ಜೊತೆಗೂಡಿದ ನಮ್ಮ ಧರ್ಮದತ್ತಿನ ಟ್ರಸ್ಟಿಗಳಾದ ಶ್ರೀಯುತ ಶಂಕರ ಹೆಗ್ಡೆ ಮತ್ತು ಶ್ರೀಯುತ ಡಾ. ರವಿಶಂಕರ ಶರ್ಮ ರವರ ಭೂಮಿಕೆಯಿಂದ, ನಮ್ಮಲ್ಲಿರುವ ಎಲ್ಲಾ ಮಕ್ಕಳಿಗು ಕೂಡಾ ಶಾಲೆಗಳಲ್ಲಿ ವಿದ್ಯಾಭ್ಯಾಸ, ಆರೋಗ್ಯ ಚಿಕಿತ್ಸೆ ಮತ್ತು ಊಟೋಪಚಾರಗಳು ನಿರಂತರವಾಗಿ ನಡೆಯುತ್ತಿದ್ದು, ನಮ್ಮ ಧರ್ಮದತ್ತಿಯ ಶಾಖೆಗಳನ್ನು ನಾವು ಬೇಡಿದ್ದಲ್ಲೆಲ್ಲ ಪ್ರಾರಂಭಿಸುತ್ತಾ, ಎಲ್ಲೇ ಬಡಜನತೆಗೆ ನಮ್ಮ ಸಹಾಯಗಳ ಅವಶ್ಯಕತೆ ಇರುವುದೋ ಅಲ್ಲೆಲ್ಲಾ ನಾವು ನಮ್ಮ ಆಶ್ರಮಗಳನ್ನು ಆರಂಭಿಸಲು ಪಣತೊಟ್ಟೆವು.

ನಂತರ, ವರ್ಷ ೨೦೧೪-೧೫ರ ವರೆಗೂ ಸುಮಾರು ಕಾರ್ಯಕ್ರಮಗಳನ್ನು ನಾವು ನಡೆಸುತ್ತಿದ್ದು, ನಂತರ ನಮಗೆ ವರಮಾನ ಇಲಾಖೆಯಿಂದ ನಮ್ಮ ಧರ್ಮದತ್ತಿಗೆ ನೀಡುವ ದಾನಗಳಿಗೆ ವರಮಾನ ರಿಯಾಯಿತಿಯನ್ನು ಪಡೆಯಲು ಅಧಿಕೃತವಾಗಿ (೮೦-ಜಿ) ಕೂಡಾ ಲಭ್ಯವಾಯಿತು. ವರ್ಷ ೨೦೧೨ ರಿಂದಲೂ ನಿರಂತರವಾಗಿ ನಾವು ನಮ್ಮ ವಾರ್ಷಿಕ ವರಮಾನ, ಆಯ-ವ್ಯಯಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದು, ಈಗ ನಮಗೆ ಸರ್ಕಾರದಿಂದಲೇ ನಮ್ಮ ಧರ್ಮದತ್ತಿಗೆ ಭೂಮಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ.

ಈಗ ಮುಂದೆ, ಇತ್ತೀಚೆಗಷ್ಟೇ ನಮ್ಮ ವೆಬ್ ಸೈಟ್ ಕೂಡಾ ಪ್ರಾರಂಭವಾಗಿದ್ದು, ನಾವು ನಮ್ಮ ಟ್ರಸ್ಟಿನ ಬಗ್ಗೆಗೆ ಪರಿಚಯ ಮತ್ತು ಅರಿವನ್ನು ಇನ್ನೂ ಹೆಚ್ಚು ಹೆಚ್ಚು ಜನರಲ್ಲಿ ತಲುಪಿಸಲು ಯತ್ನಿಸುತ್ತಿದ್ದೇವೆ. ಹಾಗಾಗಿ, ಯಾವುದೇ ಹಳ್ಳಿಯೂರುಗಳಲ್ಲಿ ನಮ್ಮ ಟ್ರಸ್ಟಿನ ಅವಶ್ಯಕತೆಯಿದ್ದಲ್ಲಿ, ಯಾರಾದರು ದಾನಿಗಳು ಭೂಮಿಯೊಂದನ್ನು ದಾನವಾಗಿ ಕೊಟ್ಟಲ್ಲಿ, ನಾವಲ್ಲಿಗೆ ಬಂದು ನಮ್ಮ ಟ್ರಸ್ಟಿನ ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆಗೆ ಯೋಚಿಸುತ್ತೇವೆ. ಸದ್ಯಕ್ಕಿದು ಕೇವಲ ನಮ್ಮ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದು, ಇನ್ನು ಹೊರರಾಜ್ಯಗಳ ಬಗ್ಗೆಗೆ ಯೋಚಿಸುವ ಶಕ್ತಿಯನ್ನು ನಮಗಿನ್ನು ಭಗವಂತನು ಕೊಟ್ಟಿಲ್ಲವಾದ್ದರಿಂದ, ಮೊದಲು ನಾವು ನಮ್ಮ ಅಂಗಳವನ್ನು ಸುಸ್ಥಿತಿ ಮಾಡಿಕೊಳ್ಳಲು ಟೊಂಕ ಕಟ್ಟಿದ್ದೇವೆ.

ಯಾರಾದರು, ದಾನಿಗಳಾಗಲೀ ಅಥವಾ ಸ್ವಯಂ ಸೇವಕರಾಗಲೀ, ನಮ್ಮ ಗುರುಕುಲಕ್ಕೆ ಸೇರಬೇಕೆನ್ನಿಸಿದ್ದಲ್ಲಿ, ದಯವಿಟ್ಟು ನಮ್ಮ ವೆಬ್ ಸೈಟಿಗೆ ಹೋಗಿ ನೊಂದಾಯಿಸಿಕೊಳ್ಳುವುದೋ ಇಲ್ಲವೇ ಕನಿಷ್ಟವಾಗಿ ಒಂದು ಈಮೇಲ್ ಆದರೂ ಕಳುಹಿಸಿದ್ದಲ್ಲಿ, ನಾವು ತಕ್ಷಣವೇ ನಿಮ್ಮನ್ನು ಸಂಪರ್ಕಿಸುತ್ತೇವೆ.

ಇಂತೀ ಚಿರವಿಶ್ವಾಸಿಗಳು,

ಆಡಳಿತ ವೃಂದ,
ಸುರವತ್ಸಲ ಫ಼ೌಂಡೇಷನ್
ನಮ್ಮ ವೆಬ್ ಸೈಟ್:
ಡಬ್ಲ್ಯುಡಬ್ಲ್ಯುಡಬ್ಲ್ಯು.ಸುರವತ್ಸಲಫ಼ೌಂಡೇಷನ್.ಕಮ್

Introduction of our Trust

As the God and the Nature have given us so much to live and enjoy, since beginning, there was a fire in the minds of my trustees to do something for the poor, deprived, disabled and for those who are suffering before we die in this world. Later on in the year 2008-09 all of us joined together and started a Gurukula and an Anaathashrama in a small way. As our Trust was not Officially Registered that time, in the beginning we did not get that much of support and recognition from the society. But still taking it as a challenge we continued and started to conduct various cultural programs like Sri Purudara Das and Sri Tyagaraja Araadhanas including public Sri Ganesh chaturthi, through which we got introduced to the society.

Subsequently, in the year 2009 only, the same Sri Tyagaraja Araadhana and a Blood Donation Camp we organised, started in a place donated by some donors till the year 2011 as we did not had our own place. Later on at the end of the year 2011, we took a place on rent and continued our activities there as pre-scheduled. In the starting stage as we had just 4 children with us which has grown up now to 32 children. On the same year we Officially got our trust registered both in Registrar of Trusts and also with the Government and got our 12-A.

Later on, with the helping hands of our trustees i.e. Sri. Shankar Hegde and Sri. Dr. Ravishankar Sharma, we got school admission, periodical health check-ups and other various cultural programs along with their shelter, food and other cares. At that point, having understood the need of help to the poor and deprived, we decided to start our branches at various places wherever it is needed so that the poor and the deprived should get the help.

Having continued to conduct many cultural programs till the year 2014-15, in the year 2014 we got 80-G, an exemption from the Government (Income Tax Department) for the donors who donates any charity to our trust. Since the year 2012, we are regularly filing our Income Tax Returns to the government and now we are making our efforts to get a land from the government itself for our trust for the social cause.

And recently, we have also started a website so that we can create awareness and introduce ourselves, so that we can reach more and more people. Therefore, in any places which are feasible, if someone can just donate a land to our trust, surely we can think of starting a branch there immediately subject to its viability and assessment. For the time being as it is limited only our Karnataka State, firstly we wanted to focus to our state as the god has not given us the energy still to look into other states.

Donars, Volunteers if any, wanted to join hands with our Gurukulam, please enter into our official website and register yourself or else just ping an email to us so that we will contact you at the earliest.

Yours faithfully,

Management & Admin,
Suravatsala Foundation,
Our website:
www.suravatsalafoundation.com

X