Founder’s Messages

Our Founder's Messages

ಧರ್ಮಾಧಿಕಾರಿಗಳ ಸಂದೇಶ

||ಅಸ್ಥಿರಂ ಜೀವಿತಂ ಲೋಕೇ | ಅಸ್ಥಿರೇ ಧನಯೌವನೇ ||
||ಅಸ್ಥಿರೇ ತಾರಾಃ ಪುತ್ರಶ್ಚ | ಧರ್ಮಕೀರ್ತಿಂ ದ್ವಯಂ ಸ್ಥಿರಂ||
{ಅಥರ್ವಣ ವೇದ ಮತ್ತು ಈಶೋಪನಿಷತ್ತು}

ದೈವಸೃಷ್ಟಿಯಲ್ಲಿನ ಈ ಜೀವನದಲ್ಲಿ ಜೀವಿತವು ಮತ್ತು ಲೋಕವೂ ಅಸ್ಥಿರವು. ಮತ್ತು ನಮ್ಮನ್ನು ಮೆರೆಸುತ್ತಿರುವ ಈ ಧನ ಮತ್ತು ಯೌವನಗಳು ಕೂಡಾ ಅಸ್ಥಿರವು. ಹಾಗೆಯೇ ನಾವು ನಮ್ಮದೆಂದೇ ಬೀಗುತ್ತಿರುವ ನಮ್ಮ ಸತಿ-ಪತಿ-ಸುತರು ಕೂಡಾ ಅಸ್ಥಿರರು. ಆದರೆ, ಕೇವಲ ನಾವು ಪಾಲಿಸುತ್ತಿರುವ ಧರ್ಮ ಮತ್ತು ಗಳಿಸಿದ ಕೀರ್ತಿಗಳಷ್ಟೇ ಸೃಷ್ಟಿಯಲ್ಲಿ ಸ್ಥಿರವು.

ಕೇವಲ ನಾಮಸ್ಮರಣೆಯಿಂದಷ್ಟೇ ಮೋಕ್ಷಪ್ರಾಪ್ತಿಯೆಂದು ಈಗಾಗಲೇ ನಮ್ಮ ಧರ್ಮಗ್ರಂಥಗಳು ಹೇಳಿ ಸಾರಿರುವಾಗ, ನಮ್ಮವರು, ಮನೆ-ಮಠ, ದೇಶ, ಲೌಕಿಕ ಜವಾಬ್ದಾರಿಗಳನ್ನೆಲ್ಲ ಮರೆತು ನಾವು ಮೂಗು ಹಿಡಿದು ಕುಳಿತಿದ್ದೇವೆ. ಅತ್ತ ನಮ್ಮ ದೇಶ, ಜಗ-ಜನ, ವಿಶ್ವವೇ ತನ್ನ ಅಸ್ತಿತ್ವಕ್ಕೇ ನರಳಾಡುತ್ತಿರುವಾಗ, ಸೃಷ್ಟಿ ಮತ್ತು ಮನುಷ್ಯತ್ವಗಳೇ ನಶಿಸುತ್ತಿರುವಾಗ ನಮ್ಮ ನಮ್ಮಲ್ಲಿಯೇ ನಾವಿನ್ನೂ ಹಿಂದು, ಮುಸಲ್ಮಾನ, ಕ್ರೈಸ್ತರೆಂದೆಲ್ಲಾ ಪರಸ್ಪರ ವಿಂಗಡಿತ ಗುಂಪುಗಾರಿಕೆಯಲ್ಲಿಯೇ ನಮ್ಮ ಈ ನಶ್ವರ ಮತ್ತು ಅಮೂಲ್ಯ ಜೀವನವನ್ನೇ ತಿರಸ್ಕರಿಸುತ್ತಿದ್ದೇವೆ. ಇನ್ನೊಂದೆಡೆ ವೇದಜ್ಞಾನಿಗಳಾದ ಬ್ರಾಹ್ಮಣಾದಿಗಳು ಕೂಡಾ ಇನ್ನೂ ತಮ್ಮ ಹಣೆಗೆ ಉದ್ದ ನಾಮವೋ ಇಲ್ಲವೇ ಅಡ್ಡ ನಾಮವೋ ಎಂದಿಷ್ಟೇ ತರ್ಕಕ್ಕೆ ತೊಡಗಿರುವುದು ನಿಜವಾಗಿಯೂ ಕಲಿಯುಗದಲ್ಲಿ ದುರಾದೃಷ್ಠಕರವೇ.

ವಿಶೇಷವಾಗಿ, ಇಡೀ ಈ ವಿಶ್ವಕ್ಕೇ ಹಿರಿಯಣ್ಣನಂತಿರುವ ನಮ್ಮೀ ದೇಶದ ನಮ್ಮ ಹಿಂದುಗಳಿಗೇನಾಗಿದೆಯೆಂಬುದೇ ನನಗಂತೂ ಇನ್ನೂ ಸ್ಪಷ್ಟಕರವಾಗಿಲ್ಲ. ಸೃಷ್ಟಿಯಲ್ಲಿಯೇ ಪೂಜ್ಯ ಮತ್ತು ಪುರಾತನವಾದ ನಮ್ಮೀ ಸನಾತನ ಧರ್ಮವು ನಮ್ಮೀ ಭರತವರ್ಷದಲ್ಲಿಯೇ ಹುಟ್ಟಿ, ಆವರಿಸಿದ್ದು, ಇಡೀ ವಿಶ್ವಕ್ಕೇ ಶ್ರೀಮಂತ ಮತ್ತು ಗುರುಸ್ಥಾನದಲ್ಲಿದ್ದ ಮತ್ತು ಧರ್ಮ-ಸಂಸ್ಕೃತಿಗಳ ನೆಲೆಯಾಗಿದ್ದ ನಮ್ಮೀ ದೇಶವು ಪರಕೀಯರ ಮತ್ತು ಕೆಲ ನಮ್ಮವರೇ ಹಿತಶತ್ರುಗಳಿಂದಲು ನೊಂದು ಬಳಲಿದ್ದುಂಟು. ಹಿಂದೆ ಸಾವಿರಾರು ವರ್ಷಗಳ ಕಾಲ ಮೊಗಲರ ಆಳ್ವಿಕೆಯ ನಂತರ ಇತ್ತೀಚೆಗಷ್ಟೇ ಸುಮಾರು ಇನ್ನೂರು ವರ್ಷಗಳ ದುಷ್ಟ ಆಂಗ್ಲರ ಗುಲಾಮರಾಗಿದ್ದು, ನಮ್ಮ ಸಿರಿ-ಸಂಪತ್ತುಗಳನ್ನೆಲ್ಲ ಅವರು ದೋಚಿ ಹೊತ್ತಾದ ಮೇಲೆಯೇ ಕೊನೆಗೆ ನಮ್ಮ ಅನೇಕ ದೇಶಭಕ್ತ, ಹುತಾತ್ಮರ ತ್ಯಾಗದಿಂದ ನಮ್ಮೀದೇಶವು ಸ್ವತಂತ್ರವಾಗಿದೆಯಷ್ಟೇ!

ಇನ್ನಂತೂ ನಮ್ಮ ಆ ಗತವೈಭವ ಮತ್ತು ಹಿರಿಮೆಗಳನ್ನು ನಮ್ಮಲ್ಲಿ ಪುನಃ ತರಲಾಗದೆಂಬುದಂತೂ ಕಹಿಸತ್ಯವೇ. ಆದರೂ ಬಾಳುವ ಈ ಕೇವಲ ನರಜನ್ಮದಲ್ಲಿ ಹಿರಿತನದ ಧರ್ಮಕ್ಕಿರಲಿ, ಕನಿಷ್ಟ ಮನುಷ್ಯತ್ವಕ್ಕಾದರೂ ಸರ್ವಧರ್ಮಗಳೂ ಸಮಾನವೆನ್ನುತ್ತಾ, ಎಲ್ಲಾ ನರ-ಪಶು-ಪಕ್ಷಿ ಅಲ್ಲದೇ ಸಕಲ ಚರಾಚರಗಳಲ್ಲಿಯೂ ಅದೇ ನಿರಾಕಾರ ಬ್ರಹ್ಮನ ದೈವಾತ್ಮವೇ ರಾರಾಜಿಸುತ್ತಿರುದೆಂದರಿತು, ನಾವೆಲ್ಲರೂ ಆ ಏಕೈಕ ದೈವನ ಸಂತತಿಯೆಂದು ಈಗಲಾದರೂ ಅರಿತು, ಬನ್ನಿ ಸಾಯುವ ಮುನ್ನ ತುಸು ನಗುನಗುತ್ತಾ, ಒಗ್ಗೋಟ್ಟಾಗಿ ಸಾಕಿಷ್ಟು ಮನುಷ್ಯರಂತೆ ಇಲ್ಲೀಗಿಂದಲೇ ಬಾಳಿಬಿಡೋಣ.

||ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |
ಹೊಟ್ಟೇ ಜೀರ್ಣಿಸುವಷ್ಟೆ: ಮಿಕ್ಕುದ್ದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ ? – ಮಂಕುತಿಮ್ಮ ||
{ದಿ|| ಶ್ರೀ ಡಿ.ವೀ.ಜಿ. -ಮಂಕುತಿಮ್ಮನ ಕಗ್ಗ}

ನೀನೆಷ್ಟು ಊಟ ಮಾಡಿದರೂ ನಿನ್ನದೇಹಕ್ಕೆ ಸೇರಿಪುಷ್ಟಿಯಾಗುವುದು, ನೀನು ಎಷ್ಟು ಜೀರ್ಣಿಸಿಕೊಳ್ಳಲು ಸಾಧ್ಯವೋ ಅಷ್ಟು ಮಾತ್ರವೇ. ಏಕೆಂದರೆ, ಮಿಕ್ಕ ಊಟವೆಲ್ಲವು ಕಸವಾಗಿ ಹೊರಕ್ಕೆ ಹೋಗುತ್ತದೆ. ಹಾಗೆಯೇ ನೀನು ಅದೆಷ್ಟು ಸಂಪಾದಿಸಿದ್ದರು ಕೂಡಾ ನಿನಗೆ ದಕ್ಕುವುದು ಒಂದು ಹಿಡಿಯಷ್ಟು ಹಿಟ್ಟು ಮಾತ್ರವೇ ಬಿಟ್ಟರೆ, ಇನ್ನೂ ಮಿಕ್ಕುಳಿದುದ್ದೆಲ್ಲವನ್ನೂ ಮತ್ತಿನ್ನು ಯಾರೋ ಅನುಭವಿಸುತ್ತಾರೆ.

||You are what your deepest desire is
As your Desire is, so your Intention
As your Intentions is, so is your Will
As your Will is, so your Deed
As your Deed is so your Destiny||
{Vedopanishads}

The Life, Time and the Transformations are on since the creations of this universe. They are not at all in anybody’s control under the sun. There is an unselfish, mighty power which is silently designing, creating and maintaining this gigantic creation out of which we do not know even a needle-tip. But the amazing thing is whatever we know are sure of it!

Apart from our Sanatana Religion, all the other religions, Epics and Scriptures of all the beliefs in the world have advocated only peace, love and help the needy. Of course, we cannot help everybody but surely, everybody can help someone! Both the God and the creation has never demanded anything from the human beings in return for having created and provided the world itself only for their utility. It is different and unfortunate that despite the god and creation have provided everything, we the human being because of our greed and selfishness, basically we have lost both smile and the life.

Thinking every time that we are going to establish permanently here, we are still busy in decorating our homes and lives that too on the cost of others. Fortunately, we are comfortable, complete and self-sufficient. But there are many human beings, animals who are deprived, poor and who are very needy of basic amenities like food, clothing, shelter, education, health and drinking water above all.

Once we are fortunate to earn hundreds of pounds, why should not we donate a penny out of that for the poor and deprived? Because as it is said “ We make a LIVING out of what we get, But We make a LIFE out of what we give” Please come and donate to our charitable trust which is concerned only about social cause and responsibility.

X